Index   ವಚನ - 952    Search  
 
ಅಯ್ಯಾ ತನುಶುದ್ಧನಾಗಿ ಇಷ್ಟಲಿಂಗವ ಪೂಜಿಸಬೇಕು. ಮನಶುದ್ಧನಾಗಿ ಪ್ರಾಣಲಿಂಗವ ಧ್ಯಾನಿಸಬೇಕು. ಭಾವಶುದ್ಧನಾಗಿ ಭಾವಲಿಂಗವ ಭಾವಿಸಬೇಕು. ಇಂತೀ ತ್ರಿವಿಧವನರಿಯದೆ, `ಲಿಂಗದೇಹಿ ಸದಾ ಶುಚಿಃ' ಎಂಬೊಂದು ವಾಕ್ಯವನೆ ಮುಂದುಮಾಡಿ `ಕ್ರಿಯಾದ್ವೈತಂ ನ ಕರ್ತವ್ಯಂ' ಎಂಬ ವಾಕ್ಯವ ಮರೆಯಾಚಿ, ಸ್ನಾನಪೂಜಾದಿ ಸತ್ಕ್ರಿಯಾಸಂಪನ್ನನಾಗದೆ ಶಮದಮಾದಿ ಸದ್ಗುಣಸಂಪತ್ತಿಯ ಪಡೆಯದೆ, ನಿತ್ಯನಿರ್ಮಲತ್ವ ನೆಲೆಯಾಗದೆ, ಆನು ಶುದ್ಧನಾದೆನೆಂಬ ಕ್ರಿಯಾದ್ವೈತಿಯಾದ ಪಾತಕನ ನಾಯಕನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವ.