Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1052 
Search
 
ಉದಾಸೀನವ ಮಾಡದ ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ್ಠರು, ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳೆವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು, ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ: "ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್| ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ|| ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ.| ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್"|| ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ್ಟವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.
Art
Manuscript
Music
Your browser does not support the audio tag.
Courtesy:
Video
Transliteration
Udāsīnava māḍada bhaktara mandiradalli hokku liṅgārcaneya māḍuva jaṅgamada pariyāyaventendaḍe; ā bhaktana gr̥hadalli kartanāgi nindu bhāṇḍabhājanaṅgaḷa muṭṭi sēveya māḍuva ā bhaktana satisutamāte sahōdara bandhujana bhr̥tya dāsiyaru modalāda sarvarū liṅgārcaka śrēṣṭharu, pādōdaka prasāda viśvāsa bhaktiyuktarembudanaridu andandiṅgavara hondi mundugoṇḍirpa tāmasagaḷannu hindugaḷevutta satya bhaktiyanu banda padārthavanu prasādavendē kaṇḍu kaikoṇḍu, liṅgārpita ghanaprasādabhōgiyāgi tanna okkuda mikkudanā bhaktajanakikki Tannalli oḍagūḍikoṇḍu saluhaballa jaṅgamavē jagatpāvana. Initallade avaru naḍedante naḍeyili, avaru koṇḍa kāraṇa namagēkendu ā bhaktajanaṅgaḷalli hoddirda tāmasaṅgaḷanu pariharisade tanna oḍalukakkulatege upādhiya nuḍidu tam'ma oḍala horeva daruśanajaṅguḷigaḷellarū jaṅgamasthalakke sallaru. Adentendoḍe: Tāmasaṁ bhaktagēhānāṁ śvānamānsasamaṁ bhavēt| iti saṅkalpya bhun̄janti tē jaṅgamā bahirnarāḥ|| śvāpiṇḍaṁ kurutē yēna lāṅgūlē cālanaṁ yathā.| Upādhijaṅgamaṁ yasya tasya jīvēśca gacchayēt|| intendudāgi Idu kāraṇa tāmasaviḍidu māḍuvāta bhaktanalla. Ā tāmasa mukhadinda māyōcchiṣṭava koṇḍāta jaṅgamavalla avarīrvarannu kūḍalacennasaṅgayya ippatteṇṭukōṭi narakadallikkuva.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: