Index   ವಚನ - 1125    Search  
 
ಕಳಾಮುಖಿ ಬಿಂದುವನೊಗೆದನು, ಅಣುವಿನಾಧಾರವನೊಗೆದನು, ಪ್ರಣವದಾಧಾರದಲ್ಲಿ ಮಹೀತಳವನೊಗೆದನು, ಮಧ್ಯನಾದದಲ್ಲಿ ಮರೀಚಕನನೊಗೆದನು. ಸುನಾದದಲ್ಲಿ ಬಸವಣ್ಣನನೊಗೆದನು. ನನ್ನನೇಕೆ ಬಿಳಿದು ಮಾಡನಯ್ಯಾ ತನ್ನ ಬಿಳಿದಿನೊಳಯಿಂಕೆ? ಎನ್ನ ಕರೆದುಕೊಂಡು ತನ್ನಂತೆ ಮಾಡನು. ನಾನು ಪ್ರಸಾದಿ ಬಸವಣ್ಣನೆ ಪದಾರ್ಥ. ಪ್ರಸಾದ-ಪದಾರ್ಥವೆಂಬೆರಡರ ಸಂದಿನಲ್ಲಿ ಕೂಡಲಚೆನ್ನಸಂಗನ ಶರಣನು ಮಡಿವಾಳಮಾಚಯ್ಯ.