Index   ವಚನ - 1128    Search  
 
ಕಾಣಬಾರದ ಘನವ ಕರದಲ್ಲಿ ಧರಿಸಿದ, ಹೇಳಬಾರದ ಘನವ ಮನದಲ್ಲಿ ತೋರಿದ, ಉಪಮಿಸಬಾರದ ಘನವ ನಿಮ್ಮ ಶ್ರೀಪಾದದಲ್ಲಿ ತೋರಿದ, ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಬಸವಣ್ಣ ತೋರಿಸಿಕೊಟ್ಟನಾಗಿ ನಾನು ಬದುಕಿದೆನು ಕಾಣಾ, ಕೂಡಲಚೆನ್ನಸಂಗಮದೇವಾ.