Index   ವಚನ - 1129    Search  
 
ಕಾದನಂತೆ, ಕಣನೇರಲೇಕೊ? ನಪುಂಸಕನಂತೆ, ಗಣಿಕಾಸ್ತ್ರೀಯೇಕೊ? ನಡೆ ಹೆಣನಂತೆ, ನುಡಿಯಲೇಕೊ? ಪುರಾತರು ನುಡಿದಂತೆ ನಡೆಯಲರಿಯದವರೆಲ್ಲ ಹಾಳೂರೊಳಗೆ ನರಿ ಗುಳ್ಳೆಯ ತಿಂದು ಬಗುಳಿದಂತೆ ಕಾಣಾ, ಕೂಡಲಚೆನ್ನಸಂಗಮದೇವಾ.