ಕೆಸರಲ್ಲಿ ತಾವರೆ ಹುಟ್ಟಿ
ದೇವರ ಮಂಡೆಯಲ್ಲಿರದೆ?
ಉಚ್ಛಿಷ್ಟದಲ್ಲಿ, ಜಲಮಲಾದಿಗಳಲ್ಲಿ,
ಸಮಸ್ತಜಗದಲ್ಲಿ, ಸೂರ್ಯನ ಪ್ರಭೆ ಇದ್ದಡೇನು
ಅಲ್ಲಿ ಅದು ಸಿಕ್ಕಿಹುದೆ?
ಹೊಲೆಹದಿನೆಂಟು ಜಾತಿ
ನೂರೊಂದು ಕುಲದಲ್ಲಿ ಶರಣನು ಹುಟ್ಟಿದಡೆ,
ಆ ಜಾತಿ-ಕುಲದಂತಿರಬಲ್ಲನೆ?
ಸಾಕ್ಷಾತ್ ಪರಬ್ರಹ್ಮವೆ ಇಹ [ಲೋಕದಲ್ಲಿ]
ಸಂಸಾರಿಯಾಗಿ ಬಂದನೆಂದರಿವುದು.
ಬಹಿರಂಗದಲ್ಲಿ ಕ್ರಿಯಾರಚನೆ,
ಅಂತರಂಗದಲ್ಲಿ ಅರುಹಿನ ಸ್ವಾನುಭಾವಸಿದ್ಧಾಂತ
ಪರಿಪೂರ್ಣ ಶರಣನ,
ಈ ಮರ್ತ್ಯದ ನರಕಿ ಪ್ರಾಣಿಗಳು ಜರಿವರು.
ಕ್ರಿಯಾಚಾರವಿಲ್ಲದೆ, ಅರುಹಿನ ನೆಲೆಯನರಿಯದೆ,
ನಾನೇ ದೇವರೆಂದು ಅಹಂಕರಿಸಿಕೊಂಡಿಪ್ಪ ಅನಾಚಾರಿ
ಹೊಲೆಯರಿಗೆ ಅಘೋರನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವರಲ್ಲಿ
ಬಸವೇಶ್ವರದೇವರು ಸಾಕ್ಷಿಯಾಗಿ.
Art
Manuscript
Music
Courtesy:
Transliteration
Kesaralli tāvare huṭṭi
dēvara maṇḍeyallirade?
Ucchiṣṭadalli, jalamalādigaḷalli,
samastajagadalli, sūryana prabhe iddaḍēnu
alli adu sikkihude?
Holehadineṇṭu jāti
nūrondu kuladalli śaraṇanu huṭṭidaḍe,
ā jāti-kuladantiraballane?
Sākṣāt parabrahmave iha [lōkadalli]
sansāriyāgi bandanendarivudu.
Bahiraṅgadalli kriyāracane,
antaraṅgadalli aruhina svānubhāvasid'dhānta
paripūrṇa śaraṇana,
Ī martyada naraki prāṇigaḷu jarivaru.
Kriyācāravillade, aruhina neleyanariyade,
nānē dēvarendu ahaṅkarisikoṇḍippa anācāri
holeyarige aghōranaraka tappadu kāṇā,
kūḍalacennasaṅgamadēvaralli
basavēśvaradēvaru sākṣiyāgi.