Index   ವಚನ - 1164    Search  
 
ಕೊಂಡಡಗಿದನೊಬ್ಬ, ಕೊಟ್ಟಾರಸಿದನೊಬ್ಬನು. ಈರೇಳು ಭುವನವರಿಯಲು ವೃಷಭನು ವಿಸ್ಮಯಗೊಂಡನು! ಭೂಮಿಯ ಜಲಗುಗರ್ಚಿ ಹೇಮರಸವನರಸುವಂತೆ ಅರಸುತ್ತಿದ್ದನಯ್ಯಾ ಜಂಗಮದೊಳಗೆ ಲಿಂಗವನು, ಏಕೋನಿಷ್ಠೆಯ ಕಂಡಡೆ ಎತ್ತಿಕೊಂಡನಯ್ಯಾ ಶಿವನು! ಜಪಸಮಾಧಿಯೊಳಗೆ ಅಡಗಿದ್ದಡೆ, ಲಿಂಗವಾಗಿ ಬಂದರೀ ಪ್ರಭುದೇವರು. ನಿಮ್ಮಡಿಗಳ ಅಸಂಖ್ಯಾತರಿಗೆ ಮಾಡಿದ ಸಯಧಾನವ ನೀನೊಬ್ಬನೆ ಆರಿಸಿಕೊಟ್ಟಂದು, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗವೆಂದರಿದನಯ್ಯಾ ನಿಮ್ಮನು ನಮ್ಮ ಸಂಗನಬಸವಣ್ಣನು.