Index   ವಚನ - 1169    Search  
 
ಕ್ರೀಯೆಂಬುದನಾರು ಬಲ್ಲರು? ಅಂಗಲಿಂಗವೆಂಬ ಸಂದಳಿಯದುದು ಕ್ರೀಯಲ್ಲ, ಲಿಂಗಜಂಗಮವೆಂಬ ಸಂದಳಿಯದುದು ಕ್ರೀಯಲ್ಲ. ಅರ್ಪಿತ ಅನರ್ಪಿತವೆಂಬ ಸಂದಳಿಯದುದು ಕ್ರೀಯಲ್ಲ. ಅಲ್ಲ ಎನಲಿಲ್ಲ. ಇಂತೀ ಕ್ರೀಯೊಳಗಿದ್ದ ನಿಷ್ಕ್ರೀವಂತರ ತೋರಾ. ನಿಷ್ಕ್ಟೀಯೆಂಬುದಾವುದು? ಕ್ರೀ ತನು-ನಿಷ್ಕ್ರೀ ಪ್ರಾಣ, ತನುವೆ ಲಿಂಗ-ಪ್ರಾಣವೆ ಜಂಗಮ. ತನುವ ಸಯವ ಮಾಡಿ, ಆ ಪ್ರಾಣಲಿಂಗಜಂಗಮಕ್ಕೆ ಮನವನರ್ಪಿಸುವ ನಿಷ್ಕ್ರೀಪ್ರಸಾದಿಗಳ ತೋರಾ. ಕೂಡಲಚೆನ್ನಸಂಗಮದೇವಾ ನಿಮ್ಮ ಧರ್ಮ, ನಿಮ್ಮ ಧರ್ಮ.