Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1170 
Search
 
ಕ್ಷೀರಸಾಗರದೊಳಗೆ ಓಲಾಡುತಿರ್ಪ ಸುಖಿ, ನೀರವಟ್ಟೆಯಕಟ್ಟಿ ನೆಳಲ ಕಡಿದು, ಏಳುಬಾವಿಯಲ್ಲಿ ನೆಗೆಯ, ಎರಡುಬಾವಿಯಲ್ಲಿ ಉಣ್ಣ! ಬೇರೆ ಹೇಳುವಡೆ; ಇಂತು ಅನುಭಾವವೆ ಪಂಚರಸವೆಂಬವನು ಪಂಚಮುಖದಲ್ಲಿ ಕಟ್ಟಿ ಪಂಚಪಂಚೈವರನೊಂದು ಮಾಡಿ ಅಂಚಟೆಯ ರೂಹಿಂಗೆ ಅರುವೆಯೊಂದನೆ ಹಾಸಿ- ಇಂತು ಸಂಸಾರದ ನಿಲವು ನೋಡಾ. ಹಲ್ಲಿ ಉತ್ತರ ಬಾಗಿಲಲ್ಲಿ ಸರಗೆಯ್ಯಲು ಅಲ್ಲಿ ತೆಂಕಣ ಶಕುನವೊಂದಾಗಲು ಬಲ್ಲ ನಂಟರು ಬಂದು ಮುಂದೆ ನಿಜ ನಿಂದಿರಲು ಎಲ್ಲರು ಮೈಸಾಗಿಸಲು ಪಾದವ ಹಿಡಿಯೆ ತಲೆಗಳ ಹಿಡಿದು ಕೈಗಳಲ್ಲಿ ನೆಗಹುತ್ತಿರಲು ಎಲ್ಲರು ಹಾಡುತ್ತ ಹರಸುವ ಹರಕೆಯಿಂದ ದೈವ ದಳವೇರಿ ಕೂಡಲಚೆನ್ನಸಂಗಯ್ಯನೊಳಗೆ `ಬಸವಣ್ಣ ಶರಣೆ'ನುತ ತಾನು ಹೊಕ್ಕ ಶರಣನು.
Art
Manuscript
Music
Your browser does not support the audio tag.
Courtesy:
Video
Transliteration
Kṣīrasāgaradoḷage ōlāḍutirpa sukhi, nīravaṭṭeyakaṭṭi neḷala kaḍidu, ēḷubāviyalli negeya, eraḍubāviyalli uṇṇa! Bēre hēḷuvaḍe; intu anubhāvave pan̄carasavembavanu pan̄camukhadalli kaṭṭi pan̄capan̄caivaranondu māḍi an̄caṭeya rūhiṅge aruveyondane hāsi- intu sansārada nilavu nōḍā. Halli uttara bāgilalli sarageyyalu alli teṅkaṇa śakunavondāgalu balla naṇṭaru bandu munde nija nindiralu Ellaru maisāgisalu pādava hiḍiye talegaḷa hiḍidu kaigaḷalli negahuttiralu ellaru hāḍutta harasuva harakeyinda daiva daḷavēri kūḍalacennasaṅgayyanoḷage `basavaṇṇa śaraṇe'nuta tānu hokka śaraṇanu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: