Index   ವಚನ - 1171    Search  
 
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಆರರ ರಾಶಿಯಂ ಕೆಡಿಸಿದಾತನೆ ಸದ್ಗುರು. ಚತುಃ ಷಡು ದಶ ದ್ವಾದಶ ಷೋಡಶ ದ್ವಿಪತ್ರವೆಂಬ ಷಡುಸ್ಥಾನದ ಮೇಲಣ ಶ್ವೇತದಳದೊಳಗಣ ಶಶಿ ಸ್ಥಾನವ ತೋರದೆ, ನಿಜಸ್ಥಾನ ಹೃದಯಕಮಲ ಕರ್ನಿಕಾ ಮಧ್ಯದ ಆತ್ಮಲಿಂಗಜ್ಯೋತಿಯ ತೋರಬಲ್ಲಡೆ ಆತನೇ ಚರಲಿಂಗ, ಶೈವ, ಭಾಟ್ಟ, ವೈಶೇಷಿಕ, ಜೈನ, ಬೌದ್ಧ ಚಾರ್ವಾಕವೆಂಬ ಷಡುದರುಶನದ ಹಂಬಲವನಡಗಿಸಿದಾತನಾಗಿ, ವಾದ ವಶ್ಯ ಯಂತ್ರ ಮಾಹೇಂದ್ರಜಾಲ ಆಕರ್ಷಣ ಉಚ್ಚಾಟನವೆಂಬ ಆರು ಭ್ರಮೆಯನಡಗಿಸಿದಾತನಾಗಿ, ಪ್ರಣವಪಂಚಾಕ್ಷರ ಪದಸ್ಥನಾಗಿ ಇಂತೀ ಷಷ್ಠಸಂಪಾದನೆ ಮೂವತ್ತಾರರಿಂದ ಕೂಡಲಚೆನ್ನಸಂಗಯ್ಯಾ ಶರಣ ಬಸವಣ್ಣ ಬರಿಯ ಬಯಲು.