ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು.
ತಾನಲ್ಲದೆ ಅನ್ಯವಾಸನೆಯಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು.
ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು.
ತಾನಲ್ಲದೆ ಅನ್ಯ ರುಚಿಯಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು.
ತಾನಲ್ಲದೆ ಅನ್ಯ ರೂಪಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ತಾಯಿತ್ತು.
ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು.
ತಾನಲ್ಲದೆ ಅನ್ಯ ಶಬ್ಧವಿಲ್ಲಾಗಿ
ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು.
ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ,
ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು.
ಅದೆ ಪಂಚವರ್ಣಾತೀತವಾದ
ಮಹಾಬಯಲೊಳಗೆ ನಿಂದ ಭೇದವು.
ಅದರಲ್ಲಿ ಜಗತ್ತು ಅಡಗಿದ ಭೇದವ,
ಮಹತ್ತು ಮಹತ್ತನೊಳಕೊಂಡ ಭೇದವ
ಏನೆಂದುಪಮಿಸುವೆನಯ್ಯಾ,
ಕೂಡಲಚೆನ್ನಸಂಗಯ್ಯಾ.
Art
Manuscript
Music
Courtesy:
Transliteration
Khaṇḍitavillāgi sarvāṅgavū nāsikavāyittu.
Tānallade an'yavāsaneyillāgi,
alliye mahattappa pr̥thviyaḍagittu.
Khaṇḍatavillāgi sarvāṅgavū jihveyāyittu.
Tānallade an'ya ruciyillāgi,
alliye mahattappa appuvaḍagittu.
Khaṇḍitavillāgi sarvāṅgavū nētravāyittu.
Tānallade an'ya rūpillāgi,
alliye mahattappa agniyaḍagittu.
Khaṇḍitavillāgi sarvāṅgavū mahāttāyittu.
Tānallade an'yasparśavillāgi,
alliye mahattappa vāyuvaḍagittu.
Khaṇḍitavillāgi sarvāṅgavū śrōtravāyittu.
Tānallade an'ya śabdhavillāgi
alliya mahattappa ākāśavaḍagittu.
Intu brahmāṇḍave pan̄cabhūtamayavādaḍe,
śaraṇana sarvāṅgadalli pan̄cabrahmamayavaḍagittu.
Ade pan̄cavarṇātītavāda
mahābayaloḷage ninda bhēdavu.
Adaralli jagattu aḍagida bhēdava,
mahattu mahattanoḷakoṇḍa bhēdava
ēnendupamisuvenayyā,
kūḍalacennasaṅgayyā.