Index   ವಚನ - 1175    Search  
 
ಗಂಧ-ದುರ್ಗಂಧ, ರಸ-ನೀರಸ, ರೂಪು-ಕುರೂಪು, ಸ್ಪರ್ಶನ-ಅಸ್ಪರ್ಶನ, ಶಬ್ದ-ನಿಶ್ಶಬ್ದ, ಲಿಂಗಮುಖಕ್ಕೆ ಬಾರದುದು ಕೃತಕಿಲ್ಬಿಷವಯ್ಯಾ, ಕೂಡಲಚೆನ್ನಸಂಗಯ್ಯಾ, ನಿಮ್ಮತ್ತ ಮುಂದಾಗದುದೆಲ್ಲ, ಎನ್ನತ್ತ ಮುಂದಾಗದು.