Index   ವಚನ - 1185    Search  
 
ಗುರುಜಂಗಮ ಪಾದೋದಕ ಪ್ರಸಾದವ ಭಕ್ತಿಯಿಂದ ಪಡೆದು ನಿಚ್ಚ ನಿಚ್ಚ ಸೇವಿಸಬಲ್ಲಡೆ ಆ ಭಕ್ತನ ಕಾಯಕರಣಾದಿಗಳ ಸೋಂಕಲಮ್ಮದೆ ದುರಿತವು ದೂರಾಗಿಪ್ಪುದು. ಆ ಸದ್ಭಕ್ತನೆ ಸದ್ಬ್ರಾಹ್ಮಣನೆಂದು ಶಾಸ್ತ್ರವು ಹೊಗಳುತ್ತಿಪ್ಪುದು. "ಪಾದೋದಕಂ ಚ ನಿರ್ಮಾಲ್ಯಂ ಭಕ್ತ್ಯಾ ಧಾರ್ಯಂ ಪ್ರಯತ್ನತಃ| ನ ತಾನ್ ಸ್ಪೃಶಂತಿ ಪಾಪಾನಿ ಮನೋವಾಕ್ಕಾಯಜಾನ್ಯಪಿ|| ಭಕ್ಷಯೇದ್ಯೋಗಿನಾ ಭಕ್ತ್ಯಾ ಪವಿತ್ರಮಿತಿ ಶಂಸಿತಮ್| ಶುದ್ಧಾತ್ಮಾ ಬ್ರಾಹ್ಮಣಸ್ತಸ್ಯ ಪಾಪಂ ಕ್ಷಿಪ್ರಂ ವಿನಶ್ಯತಿ"|| ಎಂದುದಾಗಿ. ಇಂತೀ ಪವಿತ್ರವಾದ ಪಾದೋದಕವ ಪಡೆದು ಕೂಡಲಚೆನ್ನಸಂಗಯ್ಯನ ಶರಣರು ಪರಿಶುದ್ಧರಾದರು.