ಗುರು ನಷ್ಟವಾದಡೆ ಜಂಗಮವೇ ಗುರು.
ಭಕ್ತ ಗುರುವಾದಡೆ
ಆ ಗುರು ಶಿಷ್ಯರಿಬ್ಬರೂ ಅನಾಚಾರಿಗಳು.
ಗುರು ನಷ್ಟವಾದಡೆ
ಜಂಗಮ ಗುರುವಾಗಬಹುದಲ್ಲದೆ,
ಭಕ್ತ ಗುರುವಾಗಬಲ್ಲನೆ? ಬಾರದು.
ಅದೇಕೆಂದಡೆ;
ಭೃತ್ಯಂಗೆ ಕರ್ತೃತ್ವವುಂಟೇ? ಇಲ್ಲವಾಗಿ,
ಆವಿಗೆ ತನೆಯಹುದೆ, ಬಸವಗಲ್ಲದೆ?
ಇದು ಕಾರಣ,
ಕೂಡಲಚೆನ್ನಸಂಗಮದೇವಾ
ಗುರುವಿನ ಗುರು, ಪರಮಗುರು, ಜಂಗಮ.