ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ,
ಅಚ್ಚಪ್ರಸಾದವೆಂಬಿರಿ, ಭರಿತಬೋನವೆಂಬಿರಿ.
ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು
ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು
ಅರಿವವರು ನೀವು ಕೇಳಿರೆ;
ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು ಆ ಶ್ರೀಗುರುಲಿಂಗಕ್ಕೆ
ತನುಕ್ರೀಯಿಂದ ಪಾದಾರ್ಚನೆಯ ಮಾಡಿ
ಪಾದತೀರ್ಥಮಂ ಕೊಂಡು, ಷಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ, ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ
ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ
ಪುರುಷಾಹಾರ ಪ್ರಮಾಣಿನಿಂದ ನೀಡಿ, ತೆರಹು ಮರಹಿಲ್ಲದೆ
ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ
ಹಸ್ತಮಜ್ಜನಕ್ಕೆರೆದು, ಒಕ್ಕುಮಿಕ್ಕುದ
ಕೊಂಡುಂಬುದು ಗುರುಪ್ರಸಾದ.
ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ,
ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ.
ಇನ್ನು ಲಿಂಗಪ್ರಸಾದವನರಿವ ಪರಿ;
ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ
ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ,
ತಟ್ಟುವ ಮುಟ್ಟುವ ಮರ್ಮವನರಿತು,
ಸಂಕಲ್ಪ ವಿಕಲ್ಪವಿಲ್ಲದೆ
ಭಾವಶುದ್ಧನಾಗಿ, ಏಕಚಿತ್ತದಿಂದ ಮನಮುಟ್ಟಿ,
ಲಿಂಗಕ್ಕೆ ನೈವೇದ್ಯಮಂ ತೋರಿ,
ಸೀತಾಳಮಂ ಕೊಟ್ಟು, ಸೆಜ್ಜೆಯರಮನೆಗೆ
ಬಿಜಯಂಗೈಸಿಕೊಂಡು
ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ,
ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ.
ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು.
ಕೊಡದೆ ಛಲಗ್ರಾಹಕತನದಲ್ಲಿ ಕೊಂಡು
ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ.
ಅವನ ಮುಖವ ನೋಡಲಾಗದು
ಕೂಡಲಚೆನ್ನಸಂಗಯ್ಯ.
Art
Manuscript
Music
Courtesy:
Transliteration
Guruprasādavembiri, liṅgaprasādavembiri,
accaprasādavembiri, bharitabōnavembiri.
Guruprasādavembudanu liṅgaprasādavembudanu
accaprasādavembudanu bharitabōnavembudanu
arivavaru nīvu kēḷire;
śrīgurukāruṇyavuḷḷa śivabhaktaru ā śrīguruliṅgakke
tanukrīyinda pādārcaneya māḍi
pādatīrthamaṁ koṇḍu, ṣaḍusam'mārjaneya māḍi
raṅgavāliyanikki, śrīguruva liṅgārcanege kuḷḷirisi
aṣṭavidhārcane ṣōḍaśōpacāravaṁ māḍi
puruṣāhāra pramāṇininda nīḍi, terahu marahillade
ā śrīguruvārōgaṇeyaṁ māḍida baḷika
Hastamajjanakkeredu, okkumikkuda
koṇḍumbudu guruprasāda.
Intallade kaiyoḍḍi bēḍuvāta gurudrōhi,
kai nīḍidaḍe ikkuvāta śivadrōhi.
Innu liṅgaprasādavanariva pari;
hindaṇa pariyali puruṣāhāra[va] pramāṇininda
terahu marahillade bharitabōnavāgi gaḍaṇisi,
taṭṭuva muṭṭuva marmavanaritu,
saṅkalpa vikalpavillade
bhāvaśud'dhanāgi, ēkacittadinda manamuṭṭi,
liṅgakke naivēdyamaṁ tōri,
sītāḷamaṁ koṭṭu, sejjeyaramanege
bijayaṅgaisikoṇḍu
pan̄cēndriya saptadhātu tr̥ptarāgalke,
Prasādabhōgavaṁ māḍuvudu liṅgaprasāda.
Akhaṇḍitavādaḍe irisi liṅgaprasādigaḷige koḍuvudu.
Koḍade chalagrāhakatanadalli koṇḍu
oḍala keḍisikoṇḍaḍe pan̄camahāpātaka.
Avana mukhava nōḍalāgadu
kūḍalacennasaṅgayya.