Index   ವಚನ - 1192    Search  
 
ಗುರು ಮುಟ್ಟದ ಮುನ್ನ ಪ್ರಸಾದವಾಗಬೇಕು, ಲಿಂಗ ಮುಟ್ಟದ ಮುನ್ನ ಪ್ರಸಾದವಾಗಬೇಕು, ಜಂಗಮ ಮುಟ್ಟದ ಮುನ್ನ ಪ್ರಸಾದವಾಗಬೇಕು, ಇಂತೀ ತ್ರಿವಿಧಸಾಹಿತ್ಯ ಮುಟ್ಟದ ಮುನ್ನ ಪ್ರಸಾದವ ಕೊಂಬವರ ತೋರಿಸಯ್ಯಾ ಕೂಡಲಚೆನ್ನಸಂಗಮದೇವಾ, ನಿಮ್ಮ ಧರ್ಮ, ನಿಮ್ಮ ಧರ್ಮ.