Index   ವಚನ - 1220    Search  
 
ಗುರುವೆ ಬೋನ, ಶಿಷ್ಯನೆ ಮೇಲೋಗರ. ಲಿಂಗಕ್ಕೆ ಪದಾರ್ಥವರ್ಪಿತವಯ್ಯಾ! ಘನಕ್ಕೆ ಮನವೆ ಅರ್ಪಿತ, ಮನಕ್ಕೆ ಮಹವೆ ಅರ್ಪಿತ! ಘನದೊಳಗೆ ಮನವು ತಲ್ಲೀಯವಾದ ಬಳಿಕ ಅರ್ಪಿಸುವ ಭಕ್ತನಾರು? ಆರೋಗಿಸುವ ದೇವನಾರು? ನಿತ್ಯತೃಪ್ತ ಉಣಕಲಿತನೆಂದಡೆ ಅರ್ಪಿಸಲುಂಟೆ ದೇವಾ ಮತ್ತೊಂದನು? ಕೂಡಲಚೆನ್ನಸಂಗಮದೇವಾ, ಬಸವಣ್ಣನೆ ಬೋನ, ನಾನೆ ಪದಾರ್ಥ; ಸುಚಿತ್ತದಿಂದ ಆರೋಗಿಸಯ್ಯಾ ಪ್ರಭುವೆ.