Index   ವಚನ - 1222    Search  
 
ಗುರುವೆ ಹೆಂಡತಿಯಾಗಿ, ಹೆಂಡತಿಯೆ ತಾಯಾಗಿ, ತಾಯೆ ಹೆಂಡತಿಯಾಗಿ, ಶಿಷ್ಯನೆ ಗಂಡನಾಗಿ- ಏನೆಂದು ಹೇಳುವೆ, ಏನೆಂದುಪಮಿಸುವೆ, ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ.