Index   ವಚನ - 1235    Search  
 
ಚಾಂಡಾಲಭಾಂಡದಲ್ಲಿ ಭಾಗೀರಥಿಯುದಕವ ತುಂಬಿದಡೇನೊ ಶುದ್ಧವಾಗಬಲ್ಲುದೆ? ಪಾಪಿ ಗುರುಮುಖವಾದಡೇನೊ ಲಿಂಗವನರಿಯಬಲ್ಲನೆ? ಇದು ಕಾರಣ-ಕೂಡಲಚೆನ್ನಸಂಗಮದೇವಾ ಕೂಡೆ ಮಜ್ಜನಕ್ಕೆರೆವರೆಲ್ಲ ಭಕ್ತರಾಗಬಲ್ಲರೆ?