ಜಂಗಮವೆ ಪರವೆಂದರಿದಡೇನು,
ಆ ಜಂಗಮದಂಗವಲ್ಲವೆ ಲಿಂಗ?
ಆ ಲಿಂಗಚೈತನ್ಯದರಿವೆಲ್ಲವು ಜಂಗಮವಲ್ಲವೆ?
ಅಂಗವಿಲ್ಲದ ಜೀವಕ್ಕೆ, ಆತ್ಮನಿಲ್ಲದ ಅಂಗಕ್ಕೆ,
ಸರ್ವಭೋಗದ ಸುಖವುಂಟೆ?
ಮಣ್ಣಿಲ್ಲದೆ ಮರನುಂಟೆ? ಮರನಿಲ್ಲದದ ಹಣ್ಣುಂಟೆ?
ಹಣ್ಣಿಲ್ಲದೆ ಸ್ವಾದವುಂಟೆ? ಹೀಂಗರಿವುದಕ್ಕೆ ಕ್ರಮ:
ಅಂಗವೇ ಮಣ್ಣು, ಲಿಂಗವೇ ಮರನು,
ಜಂಗಮವೇ ಫಲವು, ಪ್ರಸಾದವೆ ರುಚಿಯು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ.
Art
Manuscript
Music
Courtesy:
Transliteration
Jaṅgamave paravendaridaḍēnu,
ā jaṅgamadaṅgavallave liṅga?
Ā liṅgacaitan'yadarivellavu jaṅgamavallave?
Aṅgavillada jīvakke, ātmanillada aṅgakke,
sarvabhōgada sukhavuṇṭe?
Maṇṇillade maranuṇṭe? Maranilladada haṇṇuṇṭe?
Haṇṇillade svādavuṇṭe? Hīṅgarivudakke krama:
Aṅgavē maṇṇu, liṅgavē maranu,
jaṅgamavē phalavu, prasādave ruciyu.
Idu kāraṇa-kūḍalacennasaṅgayyanalli
sākāraliṅgave jaṅgamadaṅgavayyā prabhuve.