Index   ವಚನ - 1252    Search  
 
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಬೇಡುವ ತುಡುಗುಣಿಗಳ ಏನೆಂಬೆನಯ್ಯಾ? ಬೇಡಲಾಗದು ಭಕ್ತನ, ಕಾಡಲಾಗದು ಭವಿಯ, ಬೇಡಿ ಕಾಡಿ ಒಡಲ ಹೊರೆದನಾದರೆ, ಬೇಟೆಯನಾಡಿದ ಮೊಲನನಟ್ಟು ಬಾಣಸವ ಮಾಡಿ ನಾಯಿ ತಿಂದು ಮಿಕ್ಕುದ ತಾ ತಿಂದಂತೆ ಕೂಡಲಚೆನ್ನಸಂಗಮದೇವಾ.