Index   ವಚನ - 1265    Search  
 
ತನತನಗೆ ಕುಳ್ಳಿರ್ದು ಮನಸಿಗೆ ಬಂದಂತೆ ಘನಲಿಂಗದ ವಾರ್ತೆಯ ಗಳಹುತಿಪ್ಪರು ನೋಡಾ! ಗುರುಕಾರುಣ್ಯವ ಹಡೆಯದೆ, ಸ್ವರಬಿಂದುಗಳ ತಡೆಯದೆ, ಹರನ ಶರಣರ ಮುಂದೆ ಹಿರಿದು ಮಾತನಾಡುತಿಪ್ಪರು ನೋಡಾ! ಇರಿಯದೆ ಮೆರೆವರು, ಅರಿಯದೆ ಉಳಿವರು ಕೂಡಲಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು.