ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ:
ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ,
ಪ್ರಾಣ ತಾನಲ್ಲ, ದಶವಾಯುಗಳು ತಾನಲ್ಲ,
ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು ತಾನಲ್ಲ.
ಅಂತಃಕರಣ ಚತುಷ್ಟಯಂಗಳು
ತಾನಲ್ಲವೆಂದರಿದು ವಿವರಿಸಿ ಕಳೆದು,
ತನ್ನ ನಿಜಸ್ವರೂಪ ತಾನೇ ನೋಡಿ ಕಂಡು;
ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ
ಭೂತಾತ್ಮ ಶುದ್ಧಾತ್ಮ ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ
ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು,
ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Tanna tānarida śivayōgiya pariyentendaḍe:
Dēhi tānalla, jātijātakaṅgaḷu tānalla,
prāṇa tānalla, daśavāyugaḷu tānalla,
indriyaṅgaḷu tānalla, guṇatrayaṅgaḷu tānalla.
Antaḥkaraṇa catuṣṭayaṅgaḷu
tānallavendaridu vivarisi kaḷedu,
tanna nijasvarūpa tānē nōḍi kaṇḍu;
jīvātma antarātma paramātma mattaṁ
bhūtātma śud'dhātma nirmalātma satyātma mahātmavemba
aṣṭa ātmēśvararu ēkārthavendaridu,
alliye tallīyavāgihudīga yōga kāṇā,
kūḍalacennasaṅgamadēvā.