Index   ವಚನ - 1270    Search  
 
ತನ್ನ ಲಿಂಗಕ್ಕೆ ಕೊಡಬಾರದ ಠಾವಿನಲ್ಲಿ ಪ್ರಸಾದಿಸಿಕೊಂಡು, ತುಡುಗುಣಿ ನಾಯಂತೆ ತಿಂಬವರನೇನೆಂಬೆನಯ್ಯಾ! ಅದು ತನ್ನ ಒಡಲ ಹೊರೆವುದಲ್ಲದೆ ಹಿಡಿದ ಕುಳಕ್ಕೆ ಸಲ್ಲದು, `ದ್ರವ್ಯಂ ಜಾತು ಶುಭಂ ಭವೇತ್' ಎಂದುದಾಗಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಆಯತ ಬೀಸರವೋದ ವ್ರತಗೇಡಿಗಳನೇನೆಂಬೆನಯ್ಯಾ.