Index   ವಚನ - 1272    Search  
 
ತನ್ನ ಲಿಂಗಕ್ಕೆ ಬೋನವ ಮಾಡುವನ್ನಕ್ಕ ಭವಿಮಿಶ್ರವ ಕಳೆದೆನೆಂದು ಎಂತೆನ್ನಬಹುದು? ತನು ಭವಿ, ಆ ಹಸ್ತ ಪಂಚಮಹಾಪಾತಕ, ಮನ ಭವಿ ಅಘೋರನರಕ. `ಭವೀನಾಂ ಪಾಪದೃಷ್ಟಾನಾಂ ಪ್ರಚ್ಛನ್ನಂ ಪದಮುತ್ತಮಂ' ಎಂಬ ಶೃತಿಯನರಿದು ನನಗೆ ಭವಿಮಿಶ್ರವೆಂದು ನುಡಿವ ಲಜ್ಜೆಗೆಟ್ಟ ದುರಾಚಾರಿಗಳ, ಸಜ್ಜನ ಶುದ್ಧ ಶಿವಾಚಾರ ಸಂಪನ್ನ ಸದುಭಕ್ತರು ಮೆಚ್ಚರು ಕಾಣಾ ಕೂಡಲ ಚೆನ್ನಸಂಗಮದೇವಾ.