ತಾನು ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಮರಳಿ, ಭವಿಯಾಗಿದ್ದ ತಾಯಿ ತಂದೆ ಒಡಹುಟ್ಟಿದವರ
ಬಂಧುಬಳಗವೆಂದು ಬೆರಸಿದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು.
ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ,
ಅಗ್ನಿಯ ಮುಖದಲ್ಲಿ ಶುದ್ಧವಾದ ಬಳಿಕ
ಅದು ತನ್ನ ಪೂರ್ವಕುಲವ
ಕೂಡದು ನೋಡಾ,
ಅದೆಂತೆಂದಡೆ:
"ಅಗ್ನಿದಗ್ಧಘಟಂ ಪ್ರಾಹುರ್ನ ಭೂಯೋ ಮೃತ್ತಿಕಾಯತೇ|
ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್"||
ಎಂದುದಾಗಿ,
ಭಕ್ತನಾಗಿ, ಭವಿಯ ನಂಟನೆಂದು
ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡು
ಉಂಡನಾದರೆ ಪಂಚಮಹಾಪಾತಕ.
ಅವಂಗೆ ನಾಯಕನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಯ್ಯಾ.
Art
Manuscript
Music
Courtesy:
Transliteration
Tānu bhavitanakke hēsi bhaktanāda baḷika
maraḷi, bhaviyāgidda tāyi tande oḍahuṭṭidavara
bandhubaḷagavendu berasidare
koṇḍa māriṅge hōhudu tappadu.
Hasiya maṇṇinalli māḍida maḍake,
agniya mukhadalli śud'dhavāda baḷika
adu tanna pūrvakulava
kūḍadu nōḍā,
adentendaḍe:
Agnidagdhaghaṭaṁ prāhurna bhūyō mr̥ttikāyatē|
tacchivācārasaṅgēna na punarmānuṣō bhavēt||
endudāgi,
bhaktanāgi, bhaviya naṇṭanendu
paṅktiyalli kuḷḷirisikoṇḍu
uṇḍanādare pan̄camahāpātaka.
Avaṅge nāyakanaraka tappadu kāṇā,
kūḍalacennasaṅgayyā.