Index   ವಚನ - 1296    Search  
 
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ದರ್ಪಣಾಕೃತಿ, ಜ್ಯೋತಿರ್ಮಯಾಕೃತಿ, ನಿಷ್ಕಳಾಕೃತಿ, ನಿರಾಳಾಕೃತಿ, ನಿರಂಜನಾಕೃತಿ-ಇವು ಆಕೃತಿಗಳು. ಈ ಆಕೃತಿಗಳ ಮಧ್ಯದಲ್ಲಿ ಪ್ರಣವಂಗಳಾವಾವೆಂದಡೆ: ನಕಾರ, ಮಕಾರ, ವಕಾರ, ಯಕಾರ, ಓಂಕಾರ, ಬಕಾರ, ಕ್ಷಕಾರ, ಹಕಾರ-ಇವು ಪ್ರಣವಂಗಳು. ಈ ಪ್ರಣವಂಗಳ ನಾದಂಗಳಾವಾವೆಂದಡೆ: ಪೆಣ್ದುಂಬಿನಾದ, ವೇಣುನಾದ, ಕಿಂಕಿಣಿನಾದ, ಅಗಣಿತನಾದ, ದಿವ್ಯನಾದ. ಈ ನಾದಂಗಳಿಗೆ ಪಿಂಡಂಗಳಾವಾವೆಂದಡೆ: ಭಕ್ತನೆಂಬ ಪಿಂಡ, ಮಹೇಶ್ವರನೆಂಬ ಪಿಂಡ, ಪ್ರಸಾದಿಯೆಂಬ ಪಿಂಡ, ಪ್ರಾಣಲಿಂಗಿಯೆಂಬ ಪಿಂಡ, ಶರಣನೆಂಬ ಪಿಂಡ, ಐಕ್ಯವೆಂಬ ಪಿಂಡ, ಚಿದ್ಗುಣವೆಂಬ ಪಿಂಡ, ಚಿನ್ಮಯವೆಂಬ ಪಿಂಡ. ಚಿನ್ಮೂರ್ತಿಯೆಂಬ ಪಿಂಡ. ಈ ಪಿಂಡಂಗಳಿಗೆ ಷಡಾಧಾರಂಗಳಾವಾವೆಂದಡೆ: ಆಧಾರಚಕ್ರ, ಸ್ವಾದಿಷ್ಠಾನಚಕ್ರ, ಮಣಿಪೂರಕಚಕ್ರ, ಅನಾಹತಚಕ್ರ, ವಿಶುದ್ಧಿಚಕ್ರ, ಅಜ್ಞಾಚಕ್ರ, ಬ್ರಹ್ಮಚಕ್ರ, ಶಿಖಾಚಕ್ರ, ಪಶ್ಚಿಮಚಕ್ರ,- ಈ ಚಕ್ರಂಗಳಿಗೆ ವರ್ಣಂಗಳಾವಾವೆಂದಡೆ: ಪೀತವರ್ಣ, ಶ್ವೇತವರ್ಣ, ಪುಷ್ಯರಾಗದ ವರ್ಣ, ಮುತ್ತಿನ ವರ್ಣ, ವೈಢೂರ್ಯದ ವರ್ಣ, ಎಳೆಯ ಮಾಣಿಕ್ಯದ ವರ್ಣ, ಗೋಮೇದಿಕವರ್ಣ, ಪಶ್ಚವರ್ಣ, ವಜ್ರದ ವರ್ಣ. ಈ ವರ್ಣಂಗಳಿಗೆ ಅಂಗಗಳಾವಾವೆಂದಡೆ: ಪೃಥ್ವಿಯಂಗ, ಅಪ್ಪುವಂಗ, ಅಗ್ನಿಯಂಗ, ವಾಯುವಂಗ, ಆಕಾಶವಂಗ, ಆತ್ಮಂಗ, ಯೋಗಾಂಗ, ಭೋಗಾಂಗ, ತ್ಯಾಗಾಂಗ. ಈ ಅಂಗಗಳಿಗೆ ಆತ್ಮಂಗಳಾವಾವೆಂದಡೆ: ಜೀವಾತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಮಹಾತ್ಮ, ಚಿದಾತ್ಮ, ದಿವ್ಯಾತ್ಮ. ಈ ಆತ್ಮಂಗಳಿಗೆ ಮೂರ್ತಿಗಳಾರಾರೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ, ನಿಃಕಳ, ನಿರಾಳ, ನಿರಂಜನ. ಈ ಮೂರ್ತಿಗಳಿಗೆ ತನುಗಳಾವಾವೆಂದಡೆ: ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಳತನು, ಆನಂದತನು, ಶುದ್ಧತನು, ಚಿದ್ರೂಪತನು, ಚಿನ್ಮಯತನು, ನಿರ್ಮುಕ್ತತನು. ಈ ತನುಗಳಿಗೆ ಹಸ್ತಂಗಳಾವಾವೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ ಸದ್ಭಾವ, ನಿರ್ಭಾವ, ನಿರ್ಮಾಯ, ನಿರಾಳ. ಈ ಹಸ್ತಂಗಳಿಗೆ ಲಿಂಗಗಳಾವೆಂದಡೆ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಅಂತುಮಲ್ಲದೆ ನಿಃಕಲಲಿಂಗ, ನಿಃಶೂನ್ಯಲಿಂಗ, ನಿರಂಜನಲಿಂಗ. ಈ ಲಿಂಗಂಗಳಿಗೆ ಮುಖಂಗಳಾವಾವೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯ, ಪರಬ್ರಹ್ಮ, ಅಭ್ರಶಿಖಿ, ಉನ್ಮನಿ. ಈ ಮುಖಂಗಳಿಗೆ ಶಕ್ತಿಗಳಾವಾವೆಂದಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿಚ್ಛಕ್ತಿ, ಪರಿಪೂರ್ಣಶಕ್ತಿ, ನಿಭ್ರಾಂತಿಶಕ್ತಿ, ನಿರ್ಭಿನ್ನಶಕ್ತಿ. ಈ ಶಕ್ತಿಗಳಿಗೆ ಭಕ್ತಿಗಳಾವಾವೆಂದಡೆ: ಶ್ರದ್ಧಾಶಕ್ತಿ, ನೈಷ್ಠಿಕಾಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಆನಂದಭಕ್ತಿ, ಸಮರಸಭಕ್ತಿ, ಪರಿಪೂರ್ಣಭಕ್ತಿ, ಅಪ್ರದರ್ಶಭಕ್ತಿ, ನಿರ್ನಾಮಭಕ್ತಿ, ಅಂತುಮಲ್ಲದೆ ಅಖಂಡಭಕ್ತಿ, ನಿರಂಜನಭಕ್ತಿ. ಈ ಭಕ್ತಿಗಳಿಗೆ ಪದಾರ್ಥಂಗಳಾವಾವೆಂದಡೆ: ಗಂಧಪದಾರ್ಥ, ರಸಪದಾರ್ಥ, ರೂಪುಪದಾರ್ಥ, ಸ್ಪರ್ಶನಪದಾರ್ಥ, ಶಬ್ದಪದಾರ್ಥ, ತೃಪ್ತಿಪದಾರ್ಥ, ಆನಂದವೆಂಬ ರೂಪಪದಾರ್ಥ, ಪರಮಾನಂದವೆಂಬ ರುಚಿಪದಾರ್ಥ, ಪರಮಾಮೃತವೆಂಬ ತೃಪ್ತಿಪದಾರ್ಥ. ಈ ಪದಾರ್ಥಂಗಳು ಲಿಂಗಾರ್ಪಿತವಾದ ಪ್ರಸಾದಗಳಾವಾವೆಂದಡೆ: ಸುಗಂಧಪ್ರಸಾದ, ಸುರಸಪ್ರಸಾದ, ಸುರೂಪಪ್ರಸಾದ, ಸುಸ್ಪರ್ಶನಪ್ರಸಾದ, ಸುಶಬ್ದಪ್ರಸಾದ, ಸುತೃಪ್ತಿಪ್ರಸಾದ, ಸುವಿರಳ, ಶುದ್ಧಪ್ರಸಾದ, ಸುಪರಮಾನಂದ ಸಿದ್ಧಪ್ರಸಾದ, ಸುಪರಮಾಮೃತ ಪ್ರಸಿದ್ಧಪ್ರಸಾದ. ಈ ಪ್ರಸಾದಂಗಳ ಲಿಂಗಾರ್ಪಿತವ ಮಾಡುವ ಪೂಜಾರಿಗಳಾರಾರೆಂದೊಡೆ: ಬ್ರಹ್ಮಪೂಜಾರಿ, ವಿಷ್ಣುಪೂಜಾರಿ, ರುದ್ರಪೂಜಾರಿ, ಈಶ್ವರಪೂಜಾರಿ, ಸದಾಶಿವಪೂಜಾರಿ, ಪರಶಿವಪೂಜಾರಿ, ಅಗಣಿತನೆಂಬ ಪೂಜಾರಿ, ಅಪ್ರಮಾಣನೆಂಬ ಪೂಜಾರಿ, ಬಾಲೇಶ್ವರನೆಂಬ ಪೂಜಾರಿ. ಈ ಪೂಜಾರಿಗಳಿಗೆ ಅಧಿದೈವಂಗಳಾರಾರೆಂದಡೆ: ಭವನಧಿದೈವ, ಮೃಡನಧಿದೈವ, ಭೀಮನಧಿದೈವ, ಮಹಾದೇವನಧಿದೈವ, ಮಹಾಶ್ರೀಗುರುವಧಿದೈವ, ಪದ್ಮೋದ್ಭವನಧಿದೈವ, ಚಿದ್ಬಿಂದುವಧಿದೈವ, ಚಿತ್ಸೂರ್ಯವಧಿದೈವ. ಈ ಅಧಿದೈವಂಗಳಿಗೆ ಬ್ರಹ್ಮಮೂರ್ತಿಗಳಾರಾರೆಂದಡೆ: ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ, ವಿಜ್ಞಾನಬ್ರಹ್ಮ, ಪರಬ್ರಹ್ಮ, ಪರಿಪೂರ್ಣಬ್ರಹ್ಮ, ಅಖಂಡಬ್ರಹ್ಮ, ಅವಿರಳಬ್ರಹ್ಮ. ಈ ಬ್ರಹ್ಮಗಳಿಗೆ ಕಲೆಗಳಾವಾವೆಂದಡೆ: ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರಕಲೆ, ಅನಾದಿಯೆಂಬಕಲೆ, ನಿರುಪಮಕಲೆ, ನಿರ್ವಾಚ್ಯಕಲೆ. ಈ ಕಲೆಗಳಿಗೆ ಸಾದಾಖ್ಯಂಗಳಾವಾವೆಂದಡೆ: ಕರ್ಮಸಾದಾಖ್ಯ, ಕರ್ತೃಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯ, ಮಹಾಸಾದಾಖ್ಯ, ನಿರ್ಮಾಯಸಾದಾಖ್ಯ, ಅವಿರಳಸಾದಾಖ್ಯ, ನಿರ್ಮುಕ್ತಿಸಾದಾಖ್ಯ. ಈ ಸಾದಾಖ್ಯಂಗಳಿಗೆ ಲಕ್ಷಣಂಗಳಾವಾವೆಂದಡೆ: ಸತ್ತುವೆಂಬ ಲಕ್ಷಣ, ಚಿತ್ತುವೆಂಬ ಲಕ್ಷಣ, ಆನಂದವೆಂಬ ಲಕ್ಷಣ, ನಿತ್ಯವೆಂಬ ಲಕ್ಷಣ, ಪರಿಪೂರ್ಣವೆಂಬ ಲಕ್ಷಣ, ಅಖಂಡನೆಂಬ ಲಕ್ಷಣ, ಅನಾಮಯವೆಂಬ ಲಕ್ಷಣ, ಅಗಮ್ಯವೆಂಬ ಲಕ್ಷಣ, ಅಪ್ರಮಾಣವೆಂಬ ಲಕ್ಷಣ. ಈ ಲಕ್ಷಣಂಗಳಿಗೆ ಸಂಜ್ಞೆಗಳಾವಾವೆಂದಡೆ: ಪರವೆಂಬ ಸಂಜ್ಞೆ, ಗೂಢವೆಂಬ ಸಂಜ್ಞೆ, ಶರೀರಸ್ಥವೆಂಬ ಸಂಜ್ಞೆ, ಲಿಂಗಕ್ಷೇತ್ರವೆಂಬ ಸಂಜ್ಞೆ, ಅನಾದಿವತ್ ಎಂಬ ಸಂಜ್ಞೆ, ಮಹಾಸಂಜ್ಞೆ, ನಿರ್ನಾಮವೆಂಬ ಸಂಜ್ಞೆ, ಅಪ್ರಮಾಣವೆಂಬ ಸಂಜ್ಞೆ, ಅವಿರಳ ಸಂಜ್ಞೆ. ಈ ಸಂಜ್ಞೆಗಳಿಗೆ ದಿಕ್ಕುಗಳಾವಾವೆಂದಡೆ: ಪಶ್ಚಿಮದಿಕ್ಕು, ಉತ್ತರದಿಕ್ಕು, ದಕ್ಷಿಣದಿಕ್ಕು, ಪೂರ್ವದಿಕ್ಕು, ಊರ್ಧ್ವದಿಕ್ಕು, ಗಂಭೀರದಿಕ್ಕು, ಧನದಿಕ್ಕು, ಸುದ್ವವಯನೆಂಬ ದಿಕ್ಕು, ಜ್ಞಾನಶೂನ್ಯಮಹಾಜ್ಯೋತಿ ದಿವ್ಯವಾದ ಘೋಷದಿಕ್ಕು. ಈ ದಿಕ್ಕುಗಳಿಗೆ ವಕ್ತ್ರಂಗಳಾವಾವೆಂದಡೆ: ತತ್ಪುರುಷವಕ್ತ್ರ, ಈಶಾನವಕ್ತ್ರ, ಗೋಪ್ಯವಕ್ತ್ರ, ತಾರಕಬ್ರಹ್ಮವೆಂಬ ವಕ್ತ್ರ, ಸುರಾಳವೆಂಬ ವಕ್ತ್ರ, ನಿರಂಜನವೆಂಬ ವಕ್ತ್ರ. ಈ ವಕ್ತ್ರಂಗಳಲ್ಲಿ ಪುಟ್ಟಿದ ವೇದಂಗಳಾವಾವೆಂದಡೆ: ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣವೇದ, ಅಜಪವೇದ, ಗಾಯತ್ರಿವೇದ, ಗಾಂಧರ್ವವೇದ, ಧನುರ್ವೇದ, ಕಾಣ್ವವೇದ, ಅಂತುಮಲ್ಲದೆ ಆಯುರ್ವೇದ, ವರ್ತುಳವೇದ, ಅರ್ಥವೇದ. ಈ ವೇದಂಗಳಿಗೆ ಅಧ್ವಂಗಳಾವಾವೆಂದಡೆ: ಭುವನಾಧ್ವ, ಪದಾಧ್ವ, ವರ್ಣಾಧ್ವ, ಕಲಾಧ್ವ, ತತ್ತ್ವಾಧ್ವ, ಮಂತ್ರಾಧ್ವ, ಲಿಂಗಾಧ್ವ, ಪ್ರಸಾದಾಧ್ವ, ಸರ್ವಶೂನ್ಯಾಧ್ವ, ಈ ಸಕೀಲಂಗಳೆಲ್ಲ ಇಪ್ಪ ಬ್ರಹ್ಮದ ವೃತ್ತ, ಕಟಿ, ವರ್ತುಳ, ಗೋಮುಖ, ನಾಳ, ಗೋಳಕ, ಆಜ್ಯಪ್ರದಾರಿಕೆ, ಅಭ್ರಶಿಖಿ, ಚಿದಬ್ಜವೆಂಬ ನವಸ್ಥಾನಂಗಳಲ್ಲಿ ಸಂಬಂಧವಾಗಿಹವು. ಅದೆಂತೆಂದು ಸದ್ಭಕ್ತ ಶರಣಜನಂಗಳು ಬೆಸಗೊಂಡಲ್ಲಿ, ಮುಂದೆ ತ್ರಿವಿಧ ಲಿಂಗಾನುಭಾವಿಗಳಾದ ಷಟ್ಸ್ಥಲಬ್ರಹ್ಮಿಗಳು ಸೂತ್ರವಿಟ್ಟು ನಿರೂಪಿಸುತ್ತಿಹರು. ಇಂತು ಹಿಂದೆ ಹೇಳಿದ ಸಕೀಲಂಗಳನು ಹಸ್ತಾಬ್ಜ ಪೀಠದಲ್ಲಿ ಸಂಬಂಧ ಮಾಡುವ ಭೇದದ ಸದ್ಭಕ್ತ ಶರಣಜನಂಗಳು ಬೆಸಗೊಂಡಲ್ಲಿ, ಮುಂದೆ ತ್ರಿವಿಧ ಲಿಂಗಾನುಭಾವಿಗಳಾದ ಷಟ್ಸ್ಥಲ ಸಂಪ್ನರಾದ ವೀರಶೈವಾಚಾರ್ಯರು ಉಪದೇಶವ ಮಾಡುತ್ತಿಹರು. ಅದೆಂತೆಂದೊಡೆ: ಆ ವಿಷ್ಣು ಬ್ರಹ್ಮದಧೋಕಂಜದಲ್ಲಿ ತಾರಕಾಕೃತಿ, ನಕಾರಪ್ರಣವ, ಪೆಣ್ದುಂಬಿನಾದ, ಭಕ್ತನೆಂಬಪಿಂಡ, ಆಧಾರಚಕ್ರ, ಪೀತವರ್ಣ, ಭಕ್ತನೆಂಬ ಮೂರ್ತಿ, ಪೃಥ್ವಿಯಂಗ, ಜೀವಾತ್ಮಭಕ್ತ, ಸ್ಥೂಲತನು, ಸುಚಿತ್ತಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಶಕ್ತಿ, ಗಂಧಪದಾರ್ಥ. ಸುಗಂಧಪ್ರಸಾದ, ಬ್ರಹ್ಮಪೂಜಾರಿ, ಭವನಧಿದೈವ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಸದ್ಯೋಜಾತವಕ್ತ್ರ, ಋಗ್ವೇದ ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಾಕೃತಿ, ಮಕಾರಪ್ರಣವ, ವೇಣುನಾದ, ಮಾಹೇಶ್ವರನೆಂಬ ಪಿಂಡ, ಸ್ವಾದಿಷ್ಠಾನಚಕ್ರ, ಶ್ವೇತವರ್ಣ, ಮಾಹೇಶ್ವರನೆಂಬ ಮೂರ್ತಿ, ಅಪ್ಪುವಂಗ, ಅಂತರಾತ್ಮ, ಸೂಕ್ಷ್ಮತನು, ಸುಬುದ್ಧಿ ಹಸ್ತ, ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷ್ಠಿಕಾಭಕ್ತಿ, ರಸಪದಾರ್ಥ, ಸುರಸಪ್ರಸಾದ, ವಿಷ್ಣುಪೂಜಾರಿ, ಮೃಡನಧಿದೈವ, ಪ್ರತಿಷ್ಠೆಯೆಂಬ ಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ವಾಮದೇವ ವಕ್ತ್ರ ಯಜುರ್ವೇದ- ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣವ, ಘಂಟಾನಾದ, ಪ್ರಸಾದವೆಂಬ ಪಿಂಡ, ಮಣಿಪೂರಕ ಚಕ್ರ, ಪುಷ್ಯರಾಗವರ್ಣ, ಪ್ರಸಾದಿಯೆಂಬ ಮೂರ್ತಿ, ಅಗ್ನಿಯೆಂಬ ಅಂಗ, ಪರಮಾತ್ಮ ಪ್ರಸಾದಿ, ಕ