Index   ವಚನ - 1299    Search  
 
ತುದಿ ಮೊದಲಿಲ್ಲದ ಘನವ ನೋಡಾ, ಒಳಹೊರಗಿಲ್ಲದಿಪ್ಪ ಅನುವ ನೋಡಾ, ಗುರುಲಿಂಗಜಂಗಮ ತಾನೆಯಾಗಿ, ಮತ್ತೆ ತಾನೆಂಬುದೇನೂ ಇಲ್ಲದ ಪರಿಯ ನೋಡಾ! ತನ್ನ ತಾನಿರ್ದೆಸೆಯ ಮಾಡಿಕೊಂಡು ನಿಜಪದವನೆಯ್ದಿಪ್ಪ ಪರಿಯ ನೋಡಾ. ಕೂಡಲಚೆನ್ನಸಂಗಮದೇವರಲ್ಲಿ ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ.