ದಾಸಿಯ ಸಂಗವ ಮಾಡಿದಡೆ ಸೂಕರನ
ಮಾಂಸವ ತಿಂದ ಸಮಾನ,
ವೇಶಿಯ ಸಂಗವ ಮಾಡಿದಡೆ
ಮಾಂಸವ ತಿಂದ ಸಮಾನ,
ಮುಂಡೆಯ ಸಂಗವ ಮಾಡಿದಡೆ
ಅಮೇಧ್ಯವ ತಿಂದ ಸಮಾನ,
ಗಂಡನ ಬಿಟ್ಟವಳ ಸಂಗವ ಮಾಡಿದಡೆ
ನರಮಾಂಸವ ತಿಂದ ಸಮಾನ,
ಗಂಡನುಳ್ಳವಳ ಸಂಗವ ಮಾಡಿದಡೆ
ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ,
ಚೋರ ಕನ್ನಿಕೆಯ ಸಂಗವ ಮಾಡಿದಡೆ
ಸುರಾಪಾನವ ಕೊಂಡ ಸಮಾನ.
ಇದು ಕಾರಣ,
ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ
ದಾಸಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ
ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು
ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ
ವಿಭೂತಿಪಟ್ಟ ಪಾಣಿಗ್ರಹಣ
ಏಕಪ್ರಸಾದಭುಕ್ತನಾಗಿ
ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ
ವರ್ತಿಸುವ ಭಕ್ತಾರಾಧ್ಯರಿಗೆ- ಗುರುವುಂಟು,
ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು;
ಆತಂಗೆ ನಿಜಮೋಕ್ಷವುಂಟು.
ಇಂತಲ್ಲದೆ, ತನ್ನಂಗವಿಕಾರಕ್ಕೆಳಸಿ
ದುರ್ವಿಷಯಾಸಕ್ತನಾಗಿ
ಆರು ಪ್ರಕಾರದ ಸ್ತ್ರೀಯರು ಮುಂತಾದ
ರಾಶಿಕೂಟದ ಸ್ತ್ರೀಯರಿಗೆ ಹೇಸದೆ
ಆಸೆ ಮಾಡುವ ಪಾಠಕರಿಗೆ
ಗುರುವಿಲ್ಲ; ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಅವ ಭಕ್ತನಲ್ಲ, ಜಂಗಮವಲ್ಲ,ಅವರಿಗೆ ಮುಕ್ತಿಯಿಲ್ಲ,
ಮುಂದೆ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Dāsiya saṅgava māḍidaḍe sūkarana
mānsava tinda samāna,
vēśiya saṅgava māḍidaḍe
mānsava tinda samāna,
muṇḍeya saṅgava māḍidaḍe
amēdhyava tinda samāna,
gaṇḍana biṭṭavaḷa saṅgava māḍidaḍe
naramānsava tinda samāna,
gaṇḍanuḷḷavaḷa saṅgava māḍidaḍe
satta heṇada benna malava tinda samāna,
cōra kannikeya saṅgava māḍidaḍe
surāpānava koṇḍa samāna.
Idu kāraṇa,
Guruvāgali, jaṅgamavāgali, bhaktanāgali
dāsi vēśi vidhave parastrī cōrakannike biḍastrī
modalāda halavu prakārada rāśikūṭada strīyara biṭṭu
śud'dhakan'yeya bhaktagaṇa sākṣiyāgi
vibhūtipaṭṭa pāṇigrahaṇa
ēkaprasādabhuktanāgi
bhaktikalyāṇavāgi satyasadācāradalli
vartisuva bhaktārādhyarige- guruvuṇṭu,
liṅgavuṇṭu, jaṅgamavuṇṭu,
pādōdakavuṇṭu, prasādavuṇṭu;
ātaṅge nijamōkṣavuṇṭu.
Intallade, tannaṅgavikārakkeḷasi
durviṣayāsaktanāgi
Āru prakārada strīyaru muntāda
rāśikūṭada strīyarige hēsade
āse māḍuva pāṭhakarige
guruvilla; liṅgavilla, jaṅgamavilla,
pādōdakavilla, prasādavilla,
ava bhaktanalla, jaṅgamavalla,avarige muktiyilla,
munde naraka tappadu kāṇā
kūḍalacennasaṅgamadēvā.