Index   ವಚನ - 1310    Search  
 
ದೂರದಲ್ಲಿ ಅರ್ಪಿತವೆಂಬ ದುರಾಚಾರಿಯ ಮಾತ ಕೇಳಲಾಗದು. ಭಾವದಲ್ಲಿ ಅರ್ಪಿತವೆಂಬ ಭ್ರಮಿತರ ಮಾತ ಕೇಳಲಾಗದು. ಅಂತರದಲ್ಲಿ ಅರ್ಪಿತವೆಂಬ ಅನಾಚಾರಗಳ ಮಾತ ಕೇಳಲಾಗದು. ತನ್ನ ಕಾಯದ ಮೇಲಣ ಲಿಂಗಕ್ಕೆ ಭಾವಶುದ್ಧಿಯಲ್ಲಿ ಕೊಟ್ಟಲ್ಲದೆ ಕೊಂಡನಾದಡೆ, ಸತ್ತ ಹಳೆಯ ನಾಯಿಯ ಅರಸಿ ತಂದು, ಅಟ್ಟದ ಮೇಲೆ ಇರಿಸಿಕೊಂಡು, ಗದ್ಯಾಣ ಗದ್ಯಾಣ ತೂಕವ ಕೊಂಡಂತೆ ಕಾಣಾ, ಕೂಡಲಚೆನ್ನಸಂಗಮದೇವಾ.