Index   ವಚನ - 1323    Search  
 
ನಮ್ಮ ಗುರುಗಳ ಸನ್ನಿಧಿಯಲ್ಲಿ ನಿಮ್ಮ ಗುರುಗಳು ಪಲ್ಲಕ್ಕಿಯನೇರುವರೆಂತು? ನಮ್ಮ ಗುರುಗಳ ಸನ್ನಿಧಿಯಲ್ಲಿ ನಿಮ್ಮ ಗುರುಗಳು ಮೆರೆವರೆಂತು? ಅವರ ಮೆರವಣಿಗೆಯೆ ಎನ್ನ ಮೆರವಣಿಗೆ, ಅವರಾನಂದವೆ ಎನ್ನಾನಂದ ಕಾಣಾ ಕೂಡಲಚೆನ್ನಸಂಗನ ಶರಣ ಸಿದ್ಧರಾಮಯ್ಯಾ.