Index   ವಚನ - 1330    Search  
 
ನಾನಾ ವಿಲಾಸದ ಜಪವ ಬಿಟ್ಟು ತಪಸಿಯಾಗಿ, ಕರಿಯ [ಕ])ತ್ತರಿಸಿ, ಕರಣನಾಳದ ಗಂಟಲ ಮುಳ್ಳ ಕಿತ್ತು, ಗಡ್ಡ, ಮಂಡೆಯ ಕೇಶವ ಸವರಿ, ಜ್ಞಾನವೆಂಬ ದಂಡವಂ ಪಿಡಿದು ವೇಳರಿಸಿ, ಕರಪಾತ್ರತಿವಿತ[ದಿಂ] ಮೂವರು ಜ್ವಾಲೆಯವರ ಜಾಡಿಸಿ, ಜೋಡಿ ಜವಳಿ ಪರನಾದನಾಗಿ ಲೀಲಾಂಗನ ವಿಲಾಸದವರಂತೆ ಹಾದುಣ್ಣದೆ ಒದ್ದು? ಲಿಂಗಾಂಗಿಗಳಲ್ಲಿ ಕ್ಷುಧಾತೃಷ್ಣೆಯರತು, ಮೂಸಿದ ಮಸಿಯಳಿದು ವಿಚಾರ ಅವಿಚಾರಿ ಅನಾಚಾರಸಂಹಾರಿ ಲಿಂಗಾಲಿಂಗಾಂಗಿ ಲಿಂಗಾರ್ಪಿತ ಶಬ್ದ ಅಕ್ಷಯನ ನಿರೀಕ್ಷಿಸುತ್ತ ಕುಕ್ಷಿಯ ಕುಕ್ಕಿರದೆ ಹೇಮಲೋಲಚಾಲನು, ತುತ್ತಿಂಗೆ ಕೂಳನಾಯ್ವ ಲಾಳಭಂಜಕರನೊಲ್ಲೆನೆಂದ ಕೂಡಲ[ಚೆನ್ನಸಂಗ]ಯ್ಯನು.