Index   ವಚನ - 1363    Search  
 
ಪಕ್ಕವಿಲ್ಲದ ಹಕ್ಕಿ ಮಿಕ್ಕು ಮೀರಿ ಹಾರಿಯಾಡುತ್ತಿರಲು, ಹಿಡಿದವರ ಹಿಡಿಯನೊಡೆದು, ಹರಿಯ ಹೃದಯವನೊಡೆದು, ಬ್ರಹ್ಮನ ಬ್ರಹ್ಮಾಂಡವನೊಡೆದು, ರುದ್ರನ ರೌದ್ರವ ಭಸ್ಮವ ಮಾಡಿ ದ್ವೈತಾದ್ವೈತವೆಂಬ ಮೇಹಕೊಂಡು, ಘನಕ್ಕೆ ಘನವೆಂಬ ಘುಟಿಕೆಯನೆ ನುಂಗಿ, ಇದ್ದುದೆಲ್ಲವಂ ನಿರ್ದೋಷವಂ ಮಾಡಿ ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದಡೆ: ಕೂಡಲಚೆನ್ನಸಂಗಯ್ಯನ ಶರಣರಲ್ಲದೆ ಮತ್ತಾರು ಮತ್ತಾರು ಇಲ್ಲವೆಂದು. ಘೂ ಘೂ ಘೂಕೆಂದಿತ್ತು.