Index   ವಚನ - 1408    Search  
 
ಪ್ರಾಣಲಿಂಗ ಎಂಬಿರಿ, ಪ್ರಾಣವೆಲ್ಲಿರ್ಪುದು? ಪ್ರಾಣಲಿಂಗದ ಭೇದವ ಬಲ್ಲಡೆ ನೀವು ಹೇಳಿರೆ. ಕಾಯಶೂನ್ಯ, ಲಿಂಗ. ಪ್ರಾಣಶೂನ್ಯ, ಶರಣ. ಕಾಯವಳಿದು ಸಮಾಧಿಯೊ? ಕಾಯವಳಿಯದೆ ಸಮಾಧಿಯೊ? ಬಲ್ಲಡೆ ನೀವು ಹೇಳಿರೆ. ಕಾಯ ವಾಯವಾಗದೆ ಸಮಾಧಿಯಂತುವ ಬಲ್ಲ, ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ಶರಣ ಬಸವಣ್ಣನು.