Index   ವಚನ - 1413    Search  
 
ಪ್ರಾಣಲಿಂಗಿಯಾಗಿ ಲಿಂಗವ ನಂಬಿದ. ನಿಸ್ಸಂಗಿಯ ನಿಲವಿನ ಬೋಧವಾವರಿಸಲೊಡನೆ, ತನ್ನ ಮರವಹುದು; ಮತ್ತೊಂದಕ್ಕಿಂಬುಗೊಡದು. ಕೂಡಲಚೆನ್ನಸಂಗನ ಅರಿವು ಅನುಪಮವಾಗಿ ವ್ಯವಹಾರದೊಳಗಿರಲೀಯದು.