Index   ವಚನ - 1418    Search  
 
ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ. ಆ ಪಟ್ಟಣಕ್ಕೆ ಒಡಲಿಲ್ಲದಾದ ಅರಸು ನೋಡಾ! ಆ ಅರಸಂಗೆ ಅರುವರು ಅರಸಿಯರು; ಮೂವರು ಸುರೂಪಿಯರು ಮೂವರು ಕುರೂಪಿಯರು; ಇವರಿಗೊಬ್ಬರಿಗೊಬ್ಬರಿಗೊಂದೊಂದು ಪರಿಯ ಕೂಟ ನೋಡಾ! ಐವರ ಕಣ್ಣ ಕಟ್ಟಿ ಒಬ್ಬಳನೆ ನೆನೆದಡೆ ಪ್ರತಿಯಿಲ್ಲದ ಸುಖವು ಸಯವಾದ ಕಾರಣ ಕೂಡಲಚೆನ್ನಸಂಗಾ, ನಿಮ್ಮ ಶರಣ ಪ್ರಭುವಿಂಗೆ ನಮೋ ನಮೋ ಎನುತಿರ್ದೆನು.