Index   ವಚನ - 1437    Search  
 
ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ, ಬೇಡದೆ ಆ ಭಕ್ತ ಮಾಡಿದ ಮಾಟವ ಪರಿಣಾಮಿಸಬಲ್ಲಡೆ ಜಂಗಮ. ಬೇಡಿಸಿಕೊಳ್ಳದೆ ಆ ಜಂಗಮ ಇಂಗಿತವನರಿದು ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೆ ಪರಮಭಕ್ತ. ಆ ಭಕ್ತ ನನ್ನದು ನಾನೆಂದು ನುಡಿದಡೆ ನಾಯ ಮಾಂಸ, ಸತ್ತ ಹೆಣನ ಮಲವು! ಇದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ ಬೇಡದೆ ಮಾಡಿಸಿಕೊಂಬುವ ಜಂಗಮಪೂರ್ವವಯ್ಯಾ.