Index   ವಚನ - 1453    Search  
 
ಭಕ್ತ ಮಹೇಶ ಪ್ರಸಾದಿಯ ಪಿಂಡಾದಿಯಾದ ಸಾಕಾರ ಮೂವತ್ತೊಂದು ಸ್ಥಲದ ಮೂಲಿಗ ತಾನಯ್ಯಾ. ಪ್ರಾಣಲಿಂಗಿ ಶರಣ ಐಕ್ಯ ಮೊದಲಾದ ನಿರಾಕಾರ ಹದಿಮೂರು ಸ್ಥಲದ ಆಚಾರ್ಯ ತಾನಯ್ಯಾ. ಈ ಉಭಯ ಕುಲಸ್ಥಲ ಒಂದೆಂದರಿದು ತಾನಾದ ಲಿಂಗೈಕ್ಯನು ಜಾತನಲ್ಲ ಅಜಾತನಲ್ಲ ಮೂರ್ತನಲ್ಲ ಅಮೂರ್ತನಲ್ಲ, ದ್ವೈತಿಯಲ್ಲ ಅದ್ವೈತಿಯಲ್ಲ, ಸಕಲನಲ್ಲ ನಿಷ್ಕಲನಲ್ಲ, ಸಕಲ ನಿಷ್ಕಲಾತ್ಮಕ ತಾನೆ ಕೂಡಲಚೆನ್ನಸಂಗಮದೇವ.