Index   ವಚನ - 1455    Search  
 
ಭಕ್ತರ ಮಠವನರಸಿಕೊಂಡು ಹೋಗಿ, ಭಕ್ತದೇಹಿಕ ದೇವನೆಂದು ಶ್ರುತಿವಾಕ್ಯವ ಕೇಳಿ, ಭಕ್ತನೆ ದೇವನೆಂದರಿದು ಯುಕ್ತಿಯನರಸುವ ಪಾತಕರ ವಿಧಿಗಿನ್ನೆಂತೊ? ಭಕ್ತರ ಮಠಕ್ಕೆ ಹೋಗಿ `ಅದು ಇದು' ಎಂಬ ಸಂದೇಹಪಾತಕ ನೀ ಕೇಳಾ: ಭಕ್ತರ ಮಠದೊಳಗೆ ಭಕ್ತಿರಸದ ಬೆಳಸು, ಲಿಂಗದ ಬೆಳೆ, ಪ್ರಸಾದದ ರಾಶಿ, ಇಂತಪ್ಪ ಪ್ರಸಾದದಲ್ಲಿಗೆ ಹೋಗಿ ಸೂತಕವನರಸುವ ಪಾತಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?