Index   ವಚನ - 1464    Search  
 
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ ಕಾಮನ ಕಾಟವು ಕಡೆಗಾಣದಯ್ಯಾ. ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ ಕಾಲದೂತರ ಭೀತಿಯು ತಪ್ಪದಯ್ಯಾ. ತನುತ್ರಯದ ಅಭಿಮಾನ ಇಹನ್ನಬರ ಸಂಸಾರಸಂತಾಪ ಓರೆಯಾಗದಯ್ಯಾ. ಕೂಡಲಚೆನ್ನಸಂಗಮದೇವಾ, ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ ನಿನ್ನ ಮಾಯದ ಮಾಟವೆಂದರಿದೆನಯ್ಯಾ.