Index   ವಚನ - 1556    Search  
 
ಲಾಂಛನಧಾರಿಗಳ ಜಂಗಮವೆಂತೆಂಬೆನಯ್ಯಾ? ವೇಷಧಾರಿಗಳ ಜಂಗಮವೆಂತೆಂಬೆನಯ್ಯಾ? ಮುದ್ರಾಧಾರಿಗಳ ಜಂಗಮವೆಂತೆಂಬೆನಯ್ಯಾ? ಮತ್ತಿನ್ನಾವುದು ಜಂಗಮವಯ್ಯಾ? ಎಂದಡೆ, ಹೇಳಿಹೆನು ಕೇಳಿ ಬೆಸಗೊಳ್ಳಿರಯ್ಯಾ: ನಿಸ್ಸೀಮನೆ ಜಂಗಮ, ನಿರಾಶ್ರಯನೆ ಜಂಗಮ, ನಿರ್ದೇಹಿಯೆ ಜಂಗಮ, ನಿರ್ದೋಷಿಯೆ ಜಂಗಮ, ನಿರುಪಾಧಿಕನೆ ಜಂಗಮ ನಿರಾಸಕ್ತನೆ ಜಂಗಮ, ನಿರಾಭಾರಿಯೆ ಜಂಗಮ, ನಿಃಪುರುಷನೆ ಜಂಗಮ. ಇಂತಪ್ಪ ಜಂಗಮದಿಂದ ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ.