Index   ವಚನ - 1568    Search  
 
ಲಿಂಗದಲ್ಲಿ ಆಯತ, ಲಿಂಗದಲ್ಲಿ ಸಾಹಿತ್ಯವಾಗಿದ್ದೆ ನಾನು, ಪರಮಸುಖಪರಿಣಾಮದೊಳಗಿದ್ದೆ ನಾನು, ಸ್ಥಾವರ ಜಂಗಮ ಉಭಯ ಒಂದಾಗಿ, ಭಿನ್ನಭಾವವ ವಿಚಾರಿಸಲಿಲ್ಲ, ಕೂಡಲಚೆನ್ನಸಂಗಮದೇವರಲ್ಲಿ ಸ್ವಯವಾಗಿರ್ದೆ ಸಹಜ.