ಲಿಂಗಪ್ರಸಾದವ ಜಂಗಮಕ್ಕೆ
ಕೊಡುವ ಕರ್ಮಿ ನೀ ಕೇಳಾ!
ಜಂಗಮಪ್ರಸಾದವ ಲಿಂಗಕ್ಕೆ
ಕೊಡುವ ಸುಧರ್ಮಿ ನೀ ಕೇಳಾ!
ಲಿಂಗಪ್ರಸಾದವ ಜಂಗಮಕ್ಕೆ
ಕೊಡುವದು ಅನಾಚಾರ;
ಜಂಗಮದ ಪ್ರಸಾದವ ಲಿಂಗಕ್ಕೆ
ಕೊಡುವದು ಸದಾಚಾರ.
ಅದೆಂತೆಂದಡೆ:
"ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ|
ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ"|| ಎಂದುದಾಗಿ,
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ.