Index   ವಚನ - 1574    Search  
 
ಲಿಂಗ ಬಿದ್ದಿತು, ಲಿಂಗ ಬಿದ್ದಿತೆಂಬರಯ್ಯಾ. ಲಿಂಗ ಬೀಳಲು ಬಲ್ಲುದೆ? ಭೂಮಿ ತಾಳಲು ಬಲ್ಲುದೆ? ಕಮ್ಮಾರ ಕಡೆದು ಮಾಡಿದ, ಬೋಗಾರ ತಂದು ಮಾರಿದ, ಗುರು ಕೊಂಡು ಮಾರಿದ ಈ ಲಿಂಗ ಬಿದ್ದಡೆ ಸಮಾಧಿಯುಂಟೆ? ಲಿಂಗವ ಕಟ್ಟಿದ ಗುರು ಸತ್ತಡೆ ಸಮಾಧಿಯನೇಕೆ ಕೊಳ್ಳರೊ ಕೂಡಲಚೆನ್ನಸಂಗಮದೇವಾ.