Index   ವಚನ - 1579    Search  
 
ಲಿಂಗ ಮುಟ್ಟದೆ ಮುಟ್ಟೆನಯ್ಯಾ! ಅದು ಅನರ್ಪಿತ, ಲಿಂಗಕ್ಕೆ ಮಾಡಲಿಲ್ಲಾಗಿ. ತಟ್ಟದೆ ಮುಟ್ಟದೆ ಮನಸೋಂಕದೆ ಅನುವಿನ ಅಂಗಕ್ಕೆ ಮಾಡಬೇಕು. ಕೊಟ್ಟು ಕೊಂಬ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿಯೆ ಬಲ್ಲ.