Index   ವಚನ - 1580    Search  
 
ಲಿಂಗಮೂರ್ತಿಯನು ನಿತ್ಯವೂ ಮೂರು ಬಾರಿ ತಪ್ಪದರ್ಚಿಸುವುದುತ್ತಮ, ಎರಡು ವೇಳೆ ಅರ್ಚಿಸುವುದು ಮಧ್ಯಮ, ಒಂದು ಸಲ ಪೂಜಿಸುವುದು ಕನಿಷ್ಠ, ಈ ತ್ರಿವಿಧನವನರಿಯದೆ ಭಕ್ತರಾದೆವೆಂದು ಯಕ್ತಿಗೆಟ್ಟು ನುಡಿದಡೆ ಮುಕ್ತಿಯನೀವನೆ ನಮ್ಮ ಕೂಡಲಚೆನ್ನಸಂಗಮದೇವ?