Index   ವಚನ - 1581    Search  
 
ಲಿಂಗಲಕ್ಷಣವಂತ ಬಸವಣ್ಣ, ಲಿಂಗಸಿರಿವಂತ ಬಸವಣ್ಣ, ಲಿಂಗ ಸೌಭಾಗ್ಯವಂತ ಬಸವಣ್ಣ. ಜಂಗಮಲಕ್ಷಣವಂತ ಬಸವಣ್ಣ, ಜಂಗಮಸಿರಿವಂತ ಬಸವಣ್ಣ, ಜಂಗಮಸೌಭಾಗ್ಯವಂತ ಬಸವಣ್ಣ. ಪ್ರಸಾದಲಕ್ಷಣವಂತ ಬಸವಣ್ಣ, ಪ್ರಸಾದಸಿರಿವಂತ ಬಸವಣ್ಣ ಪ್ರಸಾದಸೌಭಾಗ್ಯವಂತ ಬಸವಣ್ಣ. ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು.