Index   ವಚನ - 1583    Search  
 
ಲಿಂಗವಂತನ ಲಿಂಗವೆಂಬುದೆ ಶೀಲ. ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ. ಲಿಂಗವಂತನ ಅರ್ಥ-ಪ್ರಾಣ-ಅಭಿಮಾನಕ್ಕೆ ತಪ್ಪದಿಪ್ಪುದೆ ಶೀಲ. ಲಿಂಗವಂತನ ಪಾದೋದಕ-ಪ್ರಸಾದ ಸೇವೆಯ ಮಾಡುವುದೆ ಶೀಲ. ಇಂತಪ್ಪ ಶೀಲವೇ ಶೀಲ. ಉಳಿದ ಶೀಲಕ್ಕೆ ಮೆಚ್ಚುವನೆ ಕೂಡಲಚೆನ್ನಸಂಗಮದೇವ.