Index   ವಚನ - 1603    Search  
 
ವಾಸಿಸುವ ನಾಸಿಕ ನೀನೆಂದರಿದೆ, ರುಚಿಸುವ ಜಿಹ್ವೆ ನೀನೆಂದರಿದೆ, ನೋಡುವ ನಯನ ನೀನೆಂದರಿದೆ, ಮುಟ್ಟುವ ತ್ವಕ್ಕು ನೀನೆಂದರಿದೆ, ಕೇಳುವ ಶ್ರೋತ್ರ ನೀನೆಂದರಿದೆ- ಇದು ಕಾರಣ ಕೂಡಲಚೆನ್ನಸಂಗಯ್ಯಾ, ನಾ ನಿಮ್ಮ ಬೇಡಲಿಲ್ಲಾಗಿ ಕೂರ್ತು ಕೊಡಲಿಲ್ಲ.