ಶರಣನಾದಡೆ ಸ್ವಸ್ತ್ರೀ ಪರಸ್ತ್ರೀಯರ
ಅಪ್ಪಿನ ಸುಖವ ಹಿಂಗಿರಬೇಕು.
ಶರಣನಾದಡೆ ಪ್ರಪಂಚದ
ವಿಷಯಂಗಳ ಸುಖವ ಹಿಂಗಿರಬೇಕು.
ಶರಣನಾದಡೆ, ಪುತ್ರೇಷಣ, ವಿತ್ತೇಷಣ, ದಾರೇಷಣವೆಂಬ
ಈಷಣತ್ರಯಂಗಳ ಹಿಂಗಿರಬೇಕು.
ಶರಣನಾದಡೆ ದುರ್ಜನರ ಸಂಗವ ಹಿಂಗಿರಬೇಕು.
ಶರಣನಾದಡೆ, ಲಿಂಗಪತಿಧ್ಯಾನವಲ್ಲದೆ
ಅನ್ಯ ದೈವದ ಧ್ಯಾನವ ಹಿಂಗಿರಬೇಕು.
ಮತ್ತಂ ಉತ್ತರವಾತುಲೇ:
“ಈಷಣತ್ರಯ ವರ್ಜಿತಾಃನ್ನಿತ್ಯಮೇಕಾಂತವಾಸಿನಃ
ಲಿಂಗಧ್ಯಾನರತೋ ನಿತ್ಯಂ ಶರಣಸ್ಥಲಮುತ್ತಮಂ”
ಎಂದುದಾಗಿ-
ಅದೆಂತೆಂದೊಡೆ-ಸಾಕ್ಷಿ, ಶಿವಧರ್ಮೇ.
“ಪತಿರ್ಲಿಂಗಂ ಸತೀಚಾಹಮಿತಿ-ಯುಕ್ತಸ್ಸದಾ ತಥಾ|
ಪ್ರಪಂಚಸ್ಯಸುಖಂನಾಸ್ತಿ ಶರಣಾಖ್ಯಮುದೀರಿತಂ"||
ಇಂತಲ್ಲದೆ ಬರಿಯ ವಾಗದ್ವೈತದಿಂದ
ಶರಣನಾಗಬಾರದು ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Śaraṇanādaḍe svastrī parastrīyara
appina sukhava hiṅgirabēku.
Śaraṇanādaḍe prapan̄cada
viṣayaṅgaḷa sukhava hiṅgirabēku.
Śaraṇanādaḍe, putrēṣaṇa, vittēṣaṇa, dārēṣaṇavemba
īṣaṇatrayaṅgaḷa hiṅgirabēku.
Śaraṇanādaḍe durjanara saṅgava hiṅgirabēku.
Śaraṇanādaḍe, liṅgapatidhyānavallade
an'ya daivada dhyānava hiṅgirabēku.
Mattaṁ uttaravātulē:
Īṣaṇatraya varjitāḥnnityamēkāntavāsinaḥ
liṅgadhyānaratō nityaṁ śaraṇasthalamuttamaṁ”
endudāgi-
adentendoḍe-sākṣi, śivadharmē.
“Patirliṅgaṁ satīcāhamiti-yuktas'sadā tathā|
prapan̄casyasukhannāsti śaraṇākhyamudīritaṁ||
intallade bariya vāgadvaitadinda
śaraṇanāgabāradu kūḍalacennasaṅgamadēvā.